
ಅಜಾದ್ ರಸ್ತೆಯಲ್ಲಿ ಮತ್ತೆ ಗೋಮಾಂಸ ಮಾರಾಟ ಯತ್ನ – ನಗರ ಠಾಣೆ ಪೋಲಿಸರ ಕಾರ್ಯಾಚರಣೆ 30 ಕೆ.ಜಿ ಪ್ಯಾಕೆಟ್ ಮಾಡಿಟ್ಟಿದ್ದ ಗೋಮಾಂಸ ಪತ್ತೆ.
ಸಕಲೇಶಪುರ: ಪಟ್ಟಣದಲ್ಲಿ ಸಕ್ರಿಯವಾಗಿ ಗೋಮಾಂಸ ಮಾರಾಟ ಅಡ್ಡೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬುಧವಾರ ಮಧ್ಯಾಹ್ನ ಸಮಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿ ಆಧರಿಸಿ ಸಕಲೇಶಪುರ ನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಅಜಾದ್ ರಸ್ತೆಯಲ್ಲಿ ಸ್ಟಾರ್ ಅಲ್ಯೂಮಿನಿಯಂ ಎಂದು ನಾಮಫಲಕ ಹಾಕಿದ ಗ್ಯಾರೇಜ್ ಶೇಡ್ ಒಳಗೆ ಮೀನಿನ ಬಾಕ್ಸ್ ಒಳಗೆ ಅಂದಾಜು 30 ಕೆ.ಜಿ ಅಷ್ಟು ಪ್ಯಾಕೆಟ್ ಮಾಡಿಟ್ಟಿದ್ದ ಗೋಮಾಂಸ ಪತ್ತೆಯಾಗಿದೆ.ಸ್ಥಳಕ್ಕೆ ಪಶು ವೈದ್ಯಕೀಯ ಸಿಬ್ಬಂದಿಗಳನ್ನು ಕರೆಸಿಕೊಂಡು ಗೋಮಾಂಸ ಎಂದು ಖಚಿತ ಪಡಿಸಿಕೊಂಡು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
